ಮಾಧವ್ ಕುಮಾರ್ ನೇಪಾಳ್ (माधवकुमार नेपाल, ಹುಟ್ಟು ಮಾರ್ಚ್ ೧೨, ೧೯೫೩) ನೇಪಾಳದ ಪ್ರಧಾನ ಮಂತ್ರಿ. ಮಾಧವ್ ಕುಮಾರ್ ನೇಪಾಳ ಮಂಗಲ್ ಕುಮಾರ್ ಉಪಾಧ್ಯಾಯ ಮತ್ತು ದುರ್ಗಾದೇವಿ ಉಪಾಧ್ಯಾಯರಿಗೆ ಜನಿಸಿದರು. ೧೯೭೩ ರಲ್ಲಿ ತ್ರಿಭುವನ್ ವಾಣಿಜ್ಯ ಯೂನಿವರ್ಸಿಟಿಯಲ್ಲಿ ಪದವಿಯನ್ನು ಮತ್ತು ರಾಜಕೀಯಕ್ಕೆ ಬರುವ ಮುಂಚೆ ಪೂರ್ಣ ಸಮಯ ಬ್ಯಾಂಕಿಂಗ್ ಮತ್ತು ನಾಗರಿಕ ಸೇವೆಯಲ್ಲಿ ಕೆಲಸ ಮಾಡಿದರು. ಎಂ.ಕೆ. ನೇಪಾಳ ಕಮ್ಯುನಿಸ್ಟ್ ಆಂದೋಲನಕ್ಕೆ ೧೯೬೯ ರಲ್ಲಿ ಸೇರಿಕೊಂಡರು. ಅವರು ಭೂಗತ ಹೋರಾಟದಲ್ಲಿ 'ಸುಬೋಧ್','ಸುನಿಲ್', 'ರಂಜನ್' ಮತ್ತು 'ಬೈಬೆಕ್ ಎಂದು ಪಕ್ಷದ ಹೆಸರುಗಳನ್ನು ಬಳಸಿಕೊಂಡರು. == ಉಲ್ಲೇಖಗಳು ==